



ಕಥೋಲಿಕ್ ಶಿಕ್ಷಣ ಮಂಡಳಿ ಮಂಗಳೂರು ಇದರ ಅಧೀನದಲ್ಲಿರುವ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳಿಗೆ 2025-2026 ನೇ ಶೈಕ್ಷಣಿಕ ವರ್ಷಕ್ಕೆ ನೇಮಕಾತಿ ಗೊಂಡ ಶಿಕ್ಷಕರ ಮಾಹಿತಿ ಸಭೆಯನ್ನು ದಿನಾಂಕ 30.05.2025 ರಂದು ಶಾಂತಿ ಕಿರಣ್ ಸಭಾಭವನ, ಬಜ್ಜೋಡಿ ಇಲ್ಲಿ ಆಯೋಜಿಸಲಾಗಿತ್ತು. ಮೌನ ಪ್ರಾರ್ಥನೆ ಯೊಂದಿಗೆ ಅಪರಾಹ್ನ 3.30 ಗಂಟೆಗೆ ಸಭೆಯನ್ನು ಪ್ರಾರಂಭಿಸಿ ನೇಮಕಾತಿ ಗೊಂಡ ಸುಮಾರು 100 ಶಿಕ್ಷಕ / ಶಿಕ್ಷಕೇತರರಿಗೆ ನೇಮಕಾತಿ ಆದೇಶ ಹಾಗೂ ನಿಯಮಾವಳಿಗಳ ಪ್ರತಿಯನ್ನು ನೀಡಲಾಯಿತು. ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಆಗಿರುವ ವಂ . ಡಾ. ಪ್ರವೀಣ್ ಲೀಯೊ ಲಸ್ರಾದೊ ಇವರು ಶಿಕ್ಷಕರರಿಗೆ ನೀಡಿದ ಆಡಳಿತ ಮಂಡಳಿಯ ನಿಯಮಾವಳಿ ಪ್ರತಿಯಿಂದ ಶಿಕ್ಷಕರು ಪಾಲಿಸಬೇಕಾಗಿರುವ ಕೆಲವೊಂದು ಪ್ರಮುಖ ನಿಯಮಗಳ ಬಗ್ಗೆ ವಿವರಿಸಿದರು. ಸಂಜೆ 4.15 ಗಂಟೆಗೆ ಸಭೆಯು ಮುಕ್ತಾಯಗೊಂಡಿತು.
